Geography: ಭಾರತದ ಪರಿಚಯ ಭಾಗ-(04) ಕನ್ನಡದಲ್ಲಿ ವಿವರಣೆ ಸಹಿತ ಮಾಹಿತಿ ನೀದಲಾಗಿದೆ -2024.

Share with love

Geography: ಭಾರತದ ಪರಿಚಯ ಭಾಗ-(04) ಕನ್ನಡದಲ್ಲಿ ವಿವರಣೆ ಸಹಿತ ಮಾಹಿತಿ ನೀದಲಾಗಿದೆ -2024.

33.ಯಾವ ಹಿಮಾಲಯ ಶಿಖರವನ್ನು ‘ಸಾಗರ್ ಮಾತಾ’ ಎಂದು ಕರೆಯುತ್ತಾರೆ?

 1) ನಂಗ ಪರ್ವತ

2) ಧೌಲಗಿರಿ

3) ಮೌಂಟ್ ಎವರೆಸ್ಟ್

4) ಕಾಂಚನಜುಂಗ

ಉತ್ತರ: (3) ಮೌಂಟ್ ಎವರೆಸ್ಟ್

ಮೌಂಟ್ ಎವರೆಸ್ಟ್ – 8848.86 ಮೀ. ಇದನ್ನು ನೇಪಾಳದಲ್ಲಿ ಸಾಗರಮಾತಾ ಎಂದು ಮತ್ತು ಚೀನಾದಲ್ಲಿ ಚೊಮೊಲುಂಗ್ಲಾ ಅಥವಾ ಕ್ಕೊಮೊಲುಂಗ್ಯಾ ಎಂದು ಕರೆಯುವರು.

ಈ ಪರ್ವತವನ್ನು ಮೊಟ್ಟಮೊದಲಿಗೆ ಪರ್ವತಾರೋಹಣ ಮಾಡಿದವರು- ತೆನ್ಸಿಂಗ್ ಮತ್ತು ಹಿಲರಿ.

ಇದನ್ನು ಏರಿದ ಭಾರತದ ಪ್ರಥಮ ಮಹಿಳೆ: ಬಚೇಂದ್ರೀಪಾಲ್

______________________________________________

34. ಸುಣ್ಣದ ಅಸ್ಥಿಪಂಜರಗಳನ್ನು ಹೊಂದಿರುವ ಸಣ್ಣ ಸಮುದ್ರಪ್ರಾಣಿಗಳನ್ನು____ ಎಂದು ಕರೆಯಲಾಗುತ್ತದೆ.

1) ಕ್ಲಾಮಿಟೋಮೋನಸ್

2) ಫೋರಮಿನಿಫೆರಾ

3) ಹವಳದ ದಿಬ್ಬಗಳು

4) ಡಯಾಟಮ್‌ಗಳು

ಉತ್ತರ: (3) ಹವಳದ ದಿಬ್ಬಗಳು

ಇವು ಸಾಗರಗಳಲ್ಲಿ ಕಂಡುಬರುವ ಸಣ್ಣಜೀವಿಗಳ ವಸಾಹತುಗಳಾಗಿವೆ. ಇವು ಕ್ಯಾಲ್ಸಿಯಂ ಕಾರ್ಬೋನೆಟ್‌ನಿಂದ ಕೂಡಿದ ಹವಳದ ಪಾಲಿಪ್‌ಗಳಿಂದ ರೂಪುಗೊಂಡ ನೀರೊಳಗಿನ ರಚನೆಗಳಾಗಿವೆ.

ಹವಳದ ಬಂಡೆಗಳನ್ನು ಸಮುದ್ರದ ಉಷ್ಣವಲಯದ ಮಳೆಕಾಡು ಎಂದು ಪರಿಗಣಿಸಲಾಗುತ್ತದೆ ಮತ್ತು ಸಮುದ್ರದ ಮೇಲ್ಟಿಯಲ್ಲಿ ಕೇವಲ 0.1%ನಷ್ಟು ಭಾಗವನ್ನು ಆಕ್ರಮಿಸಿಕೊಂಡಿದೆ ಮತ್ತು 25% ಸಮುದ್ರ ಪ್ರಭೇದಗಳಿಗೆ ನೆಲೆಯಾಗಿದೆ.

ಅವು ಸಾಮಾನ್ಯವಾಗಿ 150 ಅಡಿಗಳಿಗಿಂತ ಕಡಿಮೆ ಆಳವಿಲ್ಲದ ಪ್ರದೇಶಗಳಲ್ಲಿ ಕಂಡು ಬರುತ್ತವೆ. ಆದರೂ ಕೆಲವು ಹವಳದ ಬಂಡೆಗಳು ಇನ್ನೂ ಆಳವಾಗಿ, ಸುಮಾರು 450 ಅಡಿಗಳವರೆಗೆ ವಿಸ್ತರಿಸುತ್ತವೆ.

ಭಾರತದಲ್ಲಿನ ಪ್ರಮುಖ ಹವಳದ ಬಂಡೆಗಳು ಪಾಕ್ ಕೊಲ್ಲಿ, ಮನ್ನಾರ್‌ಕೊಲ್ಲಿ, ಕಚ್ ಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷ ದ್ವೀಪಗಳನ್ನು ಒಳಗೊಂಡಿದೆ. ಇವುಗಳಲ್ಲಿ ಲಕ್ಷದ್ವೀಪವು ಹವಳಗಳಿಂದ ರಚನೆಯಾಗಿದೆ.

______________________________________________

35. ಭಾರತದ ಪರ್ಯಾಯ ದ್ವೀಪ ಭಾಗದ ಅತಿ ಎತ್ತರದ ಪರ್ವತ ಶಿಖರ ?

1) ಅನೈಮುಡಿ

2) ದೊಡ್ಡಬೆಟ್ಟ

3) ಮಹೇಂದ್ರಗಿರಿ

4) నిeలగిరి

ಉತ್ತರ : (1)ಅನೈಮುಡಿ

•  ಭಾರತದ ಪರ್ಯಾಯ ದ್ವೀಪ ಭಾಗದ ಅತಿ ಎತ್ತರದ ಪರ್ವತ ಶಿಖರ ಆನೈಮುಡಿ (2695 ಮೀ) ಯಾಗಿದೆ. ಪಶ್ಚಿಮಘಟ್ಟಗಳ ಎತ್ತರವಾದ ಶಿಖರಗಳೆಂದರೆ ಆನೈಮುಡಿ (2695 ಮೀ), ಮುಳ್ಳಯ್ಯನಗಿರಿ (1923 ಮೀ) ಕುದುರೆಮುಖ(1882 ಮೀ), ಪುಷ್ಪಗಿರಿ (1714 ಮೀ), ಕಾಲ್ಸು ಬಾಯಿ(1646 ಮೀ), ಸಾಲೇಹರ(1567 ವೀ) ಇತ್ಯಾದಿ.

• ಪೂರ್ವಘಟ್ಟಗಳ ಪ್ರಮುಖ ಶಿಖರಗಳೆಂದರೆ : ಆರ್ಮಕೊಂಡ (1680 ಮೀ.), ಸಿಂಗರಾಜು (1516 ಮೀ),  (1515 2.), 2 (1501 22.)

ಆರ್ಮಕೊಂಡ (ಆಂಧ್ರಪ್ರದೇಶ) ಪೂರ್ವಘಟ್ಟಗಳ ಅತ್ಯಂತ ಎತ್ತರವಾದ ಶಿಖರವೆಂದು ಪರಿಗಣಿಸಲಾಗಿದೆ.

______________________________________________

36. ಗ್ರೇಟರ್ ಹಿಮಾಲಯವನ್ನು ______ಎಂದು ಕರೆಯಲಾಗುತ್ತದೆ.

 1) ಹಿಮಾದ್ರಿ

 2) ಸಹ್ಯಾದ್ರಿ

 3) ಅಸ್ಸಾಂ ಹಿಮಾಲಯ

 4) ಶಿವಾಲಿಕ್

 ಉತ್ತರ: (1) ಹಿಮಾದ್ರಿ

ಎತ್ತರ ಮತ್ತು ಅಕ್ಷಾಂಶಗಳನ್ನಾಧರಿಸಿ ಹಿಮಾಲಯ ಪರ್ವತಗಳನ್ನು ಮೂರು ಸಮಾನಾಂತರ ಸರಣಿ ಗಳಾಗಿ ವಿಂಗಡಿಸಲಾಗಿದೆ.

 ಮಹಾಹಿಮಾಲಯ ಅಥವಾ ಹಿಮಾದ್ರಿ : ಇದು ಅತ್ಯಂತ ಒಳಭಾಗದಲ್ಲಿರುವ ಎತ್ತರವಾದ ಮತ್ತು ಅವಿಚ್ಛಿನ್ನವಾಗಿ ಹಬ್ಬಿರುವ ಸರಣಿಗಳು. (ಹಿಮಾದ್ರಿ-ದೇವರ ವಾಸಸ್ಥಾನ), ಮಹಾ ಹಿಮಾಲಯದ ಸರಾಸರಿ ಎತ್ತರವು 6100 ಮೀ.ಗಳಾಗಿದ್ದು 120-190 ಕಿ.ಮೀ. ಅಗಲವಾಗಿದೆ.

• ಕೆಳ ಹಿಮಾಲಯ ಅಥವಾ ಹಿಮಾಚಲ : ಇವುಗಳ ಸರಾಸರಿ ಎತ್ತರವು ಸುಮಾರು 1500ರಿಂದ 4500ಮೀ.ಗಳಾಗಿದ್ದು, ಸುಮಾರು 60 ರಿಂದ 80 ಕಿ.ಮೀ.ಗಳಷ್ಟು ಅಗಲವಾಗಿದೆ.

• ಹೊರ ಹಿಮಾಲಯ ಅಥವಾ ಶಿವಾಲಿಕ್ : ಇವುಗಳ ಸರಾಸರಿ ಎತ್ತರ 600ರಿಂದ 1500 ಮೀ. ಗಳಾಗಿದ್ದು ಅಗಲವು 15ರಿಂದ 50 ಕಿ.ಮೀ.ಗಳಾಗಿರುವುದು. ಶಿವಾಲಿಕ್ ಬೆಟ್ಟಗಳು ಕೆಳ ಹಿಮಾಲಯ ಮತ್ತು ಮಹಾಹಿಮಾಲಯಗಳಿಂದ ಹರಿದು ಬರುವ ನದಿಗಳು ಹೊತ್ತುತಂದ ಸಂಚಯಿಸಿದ ಮೆಕ್ಕಲು ಮಣ್ಣಿನಿಂದ ನಿರ್ಮಿತವಾಗಿದೆ.

 ಗೊತ್ತಿರಲಿ : ಶಿವಾಲಿಕ್ ಮತ್ತು ಕೆಳಹಿಮಾಲಯಗಳ ಮಧ್ಯದಲ್ಲಿ ಸಮತಟ್ಟಾದ ತಳವನ್ನು ಹೊಂದಿದ ಕಣಿವೆಗಳಿದ್ದು, ಅವುಗಳನ್ನು “ಡೊನ್ಸ್”ಗಳೆಂದು ಕರೆಯುವರು.

 ಸಹ್ಯಾದ್ರಿ- ಪಶ್ಚಿಮ ಘಟ್ಟಗಳು

 ಅಸ್ಸಾಂ ಹಿಮಾಲಯ ಪೂರ್ವಾಂಚಲ ಅಥವಾ ಪೂರ್ವದ ಬೆಟ್ಟಗಳ ಭಾಗವಾಗಿದೆ.

______________________________________________

37.  ಈ ಕೆಳಗಿನವುಗಳಲ್ಲಿ ಯಾವುದನ್ನು ‘ಇತ್ತೀಚಿನ ಮಡಿಕೆ ಪರ್ವತಗಳು’ ಎಂದು ಕರೆಯಲಾಗುತ್ತದೆ?

 1) ಅರಾವಳಿ

 2) ನೀಲಗಿರಿ

 3) ಹಿಮಾಲಯ

 4) ವಿಂಧ್ಯಾ

 ಉತ್ತರ: (3) ಹಿಮಾಲಯ

 • ಹಿಮಾಲಯ ಪರ್ವತಗಳು : ಪ್ರಪಂಚದ ಅತ್ಯಂತ ಎತ್ತರವಾದ ಹಿಮಾವೃತಗೊಂಡ ಅವಿಚ್ಛಿನವಾಗಿ ಹಬ್ಬಿರುವ ಇತ್ತೀಚಿನ ಮಡಿಕೆ ಪರ್ವತಗಳಾಗಿವೆ. ಇವು ಇತ್ತೀಚೆಗೆ ಭೂ ಅಂತರಿಕ ಶಕ್ತಿಗಳಿಂದ ಶಿಲಾಪದರುಗಳ ಮಡಚುವಿಕೆಯಿಂದ ನಿರ್ಮಾಣಗೊಂಡಿರುವುದರಿಂದ ಇವುಗಳನ್ನು ‘ಇತ್ತೀಚಿನ ಮಡಿಕೆ ಪರ್ವತ’ಗಳೆಂದು ಕರೆಯುವುದು. ಈ ಪರ್ವತಗಳು ಸುಮಾರು 2400 ಕಿ.ಮೀ. ಉದ್ದ, 240 ರಿಂದ 320 ಕಿ.ಮೀ. ಅಗಲವಾಗಿದೆ. ಸರಾಸರಿ ಎತ್ತರವು 6000 ಮೀಟರ್.

• ಅರಾವಳಿ ಬೆಟ್ಟಗಳು. : ಪ್ರಪಂಚದ ಅತ್ಯಂತ ಹಳೆಯ ಪರ್ವತಗಳು ಈ ಬೆಟ್ಟಗಳು ಬೆಣಚುಕಲ್ಲು, ನೀಸ್ ಮತ್ತು ಶಿಕ್ಷೆ ಶಿಲೆಗಳಿಂದ ಸಂಯೋಜನೆಗೊಂಡಿವೆ.

 • ನೀಲಗಿರಿ ಬೆಟ್ಟಗಳು : ಇದು ದಖನ್ ಪ್ರಸ್ಥಭೂಮಿ ಹಂತ ಹಂತವಾಗಿ ಮೇಲೆಕ್ಕೆತ್ತುವ ಮೂಲಕ ರೂಪುಗೊಂಡಿವೆ.

• ವಿಂಧ್ಯಾ ಮತ್ತು ಸತ್ಪುರ ಶ್ರೇಣಿಗಳು : ಪದರು (Sedimentary) ಶಿಲೆಗಳಿಂದ ರೂಪಿಸಲ್ಪಟ್ಟಿದೆ.

 _____________________________________________

38. ಭಾರತದ ಅತಿ ಎತ್ತರದ ಪ್ರಸ್ಥಭೂಮಿ ಯಾವುದು?

 1) ದಬ್ಬನ್ ಪ್ರಸ್ಥಭೂಮಿ

 2) ಛೋಟಾನಾಗುರ್ ಪ್ರಸ್ಥಭೂಮಿ

 3) ಲಡಾಖ್ ಪ್ರಸ್ಥಭೂಮಿ

 4) ಬಾಗೆಲ್ಖಂಡ್ ಪ್ರಸ್ಥಭೂಮಿ

 ಉತ್ತರ: (3) ಲಡಾಖ್ ಪ್ರಸ್ಥಭೂಮಿ

 ಲಡಾಖ್ ಪ್ರಸ್ಥಭೂಮಿಯು ಭಾರತದ ಅತಿ ಎತ್ತರದಲ್ಲಿರುವ ಪ್ರಸ್ಥಭೂಮಿಯಾಗಿದೆ.

 ದಬ್ಬನ್ ಪ್ರಸ್ಥಭೂಮಿ ಭಾರತದ ಅತಿದೊಡ್ಡ ಪ್ರಸ್ಥಭೂಮಿಯಾಗಿದ್ದು, 8 ರಾಜ್ಯಗಳಲ್ಲಿ ವಿಸ್ತರಿಸಿದೆ.

 • ಪ್ರಸ್ಥಭೂಮಿ (Plateaux) : ಸಮತಟ್ಟಾದ ಅಥವಾ ಏರುತಗ್ಗಿನ ಮೇಲೆ ಹಾಗೂ ಕಡಿದಾದ ಆಂಚುಗಳನ್ನು ಒಳಗೊಂಡ ಹೆಚ್ಚು ಎತ್ತರವಾದ ಭೂಭಾಗಗಳನ್ನು ಪ್ರಸ್ಥಭೂಮಿ ಅಥವಾ ಪೀಠಭೂಮಿ ಎಂದು ಕರೆಯುವರು.

 ಅತ್ಯಂತ ಎತ್ತರದ ಪ್ರಸ್ಥಭೂಮಿ ಪ್ರದೇಶ (Highest plateau region) ವೆಂದರೆ ದಖನ್ ಪ್ರಸ್ಥಭೂಮಿ- ಇದು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಛತ್ತೀಸ್‌ಗಡ್, ಒಡಿಸ್ಸಾ, ತಮಿಳುನಾಡು, ಕೇರಳ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಹರಡಿದೆ. ಭಾರತದಲ್ಲಿ ಇದು ಉತ್ತರದಲ್ಲಿ ಸುಮಾರು 100 ಮೀಟರ್ ಮತ್ತು ದಕ್ಷಿಣದಲ್ಲಿ 1000ಮೀಟರ್ ಎತ್ತರದಲ್ಲಿದೆ.

 • ವಿಶ್ವದ ಅತಿ ಎತ್ತರದ ಪ್ರಸ್ಥಭೂಮಿ-ಟಿಬೆಟ್ ಪ್ರಸ್ಥಭೂಮಿಯಾಗಿದೆ. ಇದು ಮಧ್ಯ ಏಷ್ಯಾ & ಹಿಮಾಲಯದ ಉತ್ತರದ ಸುತ್ತಲಿನ ಪ್ರದೇಶವನ್ನು ಒಳಗೊಂಡಿದೆ. ಇದು ಸರಿಸುಮಾರು 4500 ಮೀಟರ್ ಎತ್ತರವಿದೆ.

______________________________________________

39. ಹಿಮಾಲಯದ ಅತ್ಯಂತ ಪೂರ್ವದ ಶಿಖರ ಯಾವುದು

 1) ನಮ್ಚಾ ಬಾರ್ವಾ

 2) ಅನ್ನಪೂರ್ಣ

 3) ಕಾಂಚನಜುಂಗಾ

 4) ಮೌಂಟ್ ಎವರೆಸ್ಟ್

 ಉತ್ತರ: (1) ನಮ್ಚಾ ಬಾರ್ವಾ

 • ಅಸ್ಸಾಂ ಅಥವಾ ಪೂರ್ವ ಹಿಮಾಲಯದ ಶ್ರೇಣಿಗಳು ಅಸ್ಸಾಂ ಮತ್ತು ಅರುಣಾಚಲಪ್ರದೇಶ ರಾಜ್ಯಗಳಲ್ಲಿ ತೀಸ್ತಾ ನದಿಯಿಂದ ಬ್ರಹ್ಮಪುತ್ರ ನದಿ ಕಣಿವೆಯವರೆಗೆ 724ಕಿ.ಮೀ. ದೂರದವರೆಗೆ ವಿಸ್ತರಿಸಿದೆ. ಈ ವಿಭಾಗದಲ್ಲಿ ಪ್ರಮುಖವಾಗಿ ಕುಲಕಾಂಗ್ರ (7250 ಮೀ), ಚೋಮೇಲ್ಲಾರಿ(7314 ಮೀ) ಮತ್ತು ನಾಮ್ಚ್ ಬರ್ವಾ(7756ಮೀ) ಎತ್ತರವಾದ ಶಿಖರಗಳು ಕಂಡುಬರುತ್ತದೆ.

_____________________________________________

40. ರೂಪಾಂತರ ಶಿಲೆಗಳು ಶಿಲೆಯ________ ಬದಲಾಯಿಸುತ್ತವೆ 

 1) ರಚನೆ

 2) ವಿನ್ಯಾಸ

 3) 1 ಮತ್ತು 2

 4) ನಿಜವಾದ ರಾಸಾಯನಿಕ ಸಂಯೋಜನೆ

 ಉತ್ತರ: (3) 1 ಮತ್ತು 2

ಮೆಟಾಮಾರ್ಫಿಕ ಎಂಬ ಪದದ ಅರ್ಥ ರೂಪಾಂತರಗೊಳ್ಳುವುದು.

ಅಗ್ನಿ ಜನ್ಮ ಹಾಗೂ ಕಣಶಿಲೆಗಳು ಉಷ್ಣತೆ ಹಾಗೂ ಒತ್ತಡಗಳ ಪ್ರಭಾವದಿಂದ ಭೌತಿಕವಾಗಿ ಮತ್ತು ರಾಸಾಯನಿಕವಾಗಿ ಬದಲಾವಣೆಗೊಳ್ಳುವುದರಿಂದ ರೂಪಾಂತರ ಹೊಂದಿದ ಶಿಲೆಗಳು ಉಂಟಾಗುತ್ತದೆ.

ಮೂಲಶಿಲೆಗಳ ಗುಣಲಕ್ಷಣಗಳಾದ ಬಣ್ಣ, ಗಡಸುತನ, ಕಣರಚನೆ, ಖನಿಜ ಸಂಯೋಜನೆಗಳು ಪೂರ್ಣವಾಗಿ ಅಥವಾ ಭಾಗಶಃ ಬದಲಾವಣೆಯಾಗುತ್ತವೆ.

 • ಉದಾ : ಗ್ರಾನೈಟ್-ನೀಸ್, ಜೀಡಿ-ಸ್ಟೇಟ್, ಮರಳುಗಲ್ಲು-ಕ್ವಾರ್ಟ್ಟ್, ಸುಣ್ಣದಕಲ್ಲು-ಅಮೃತಶಿಲೆ, ಕಲ್ಲಿದ್ದಲು-ಗ್ರಾಫೈಟ್, ಗ್ರಾಫೈಟ್-ವಜ್ರ ಇತ್ಯಾದಿ.

______________________________________________

41. ಭಾರತದ ಒಟ್ಟು ವಿಸ್ತೀರ್ಣ ಎಷ್ಟು?

 1) 8,511,965 ಚ.ಕಿ.ಮೀ

 2) 3,897,950 ಚ.ಕಿ.ಮೀ

 3) 5,926,780 ಚ.ಕಿ.ಮೀ

 4) 3,287,263 ಚ.ಕಿ.ಮೀ

 ಉತ್ತರ: (4) 3,287,263 ಚ.ಕಿ.ಮೀ

  ಗಾತ್ರ : ಭಾರತವು ಪ್ರಪಂಚದಲ್ಲಿ ರಷ್ಯಾ, ಕೆನಡಾ. ಚೀನಾ, ಯು.ಎಸ್.ಎ.. ಬ್ರೆಜಿಲ್ ಮತ್ತು ಆಸ್ಟ್ರೇಲಿಯಗಳ ನಂತರ 7ನೆಯ (ಕ್ಷೇತ್ರದಲ್ಲಿ) ದೊಡ್ಡ ರಾಷ್ಟ್ರವಾಗಿದೆ.

 ಇದು 32,87,263 ಚ.ಕೀ.ಮೀಗಳಷ್ಟು ಭೌಗೋಳಿಕ ಕ್ಷೇತ್ರವನ್ನು ಹೊಂದಿದೆ.

 2011 ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯು 121.6 ಕೋಟಿ ಅಥವಾ 1216 ಮಿಲಿಯನ್ ಅಥವಾ 1.21 ಬಿಲಿಯನ್ ಗಳಿಷ್ಟಿದೆ. ಇದು ಪ್ರಪಂಚದ ಒಟ್ಟು ಜನಸಂಖ್ಯೆಯ ಶೇಕಡಾ17.45 ರಷ್ಟು ಇದೆ.

ಮುಂದುವರೆಯುತ್ತದೆ……….

Leave a Reply

Your email address will not be published. Required fields are marked *