Geography: ಭಾರತದ ಪರಿಚಯ ಕನ್ನಡದಲ್ಲಿ ವಿವರಣೆ ಸಹಿತ ಮಾಹಿತಿ-2024.
Geography: ಭಾರತದ ಪರಿಚಯ ಕನ್ನಡದಲ್ಲಿ ವಿವರಣೆ ಸಹಿತ ಮಾಹಿತಿ-2024.
1. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಪರಸ್ಪರ ಯಾವುದರಿಂದ ಬೇರ್ಪಡಿಸಲಾಗಿದೆ ?
1) 10° ಚಾನೆಲ್
2) ಗ್ರೇಟ್ ಚಾನೆಲ್
3) ಬಂಗಾಳ ಕೊಲ್ಲಿ
4) ಅಂಡಮಾನ್ ಸಮುದ್ರ
ಉತ್ತರ: (1)
=>(1) ಅಂಡಮಾನ್ & ನಿಕೋಬಾರ್ ದ್ವೀಪ (ಅಂಡಮಾನ್ ಮತ್ತು ನಿಕೋಬಾರ್‌ನ್ನು ಬೇರ್ಪಡಿಸುವುದು 10′ ಚಾನೆಲ್) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ (ಕೇಂದ್ರಾಡಳಿತ ಪ್ರದೇಶ) ರಾಜಧಾನಿ – ಪೋರ್ಟ್‌ಪ್ಲೇರ್ (Porthlair), ಭಾರತಕ್ಕೆ ಸೇರಿರುವ ಒಟ್ಟು 247 ದ್ವೀಪಗಳಿವೆ.
•204 ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿವೆ.
•ಬಂಗಾಳಕೊಲ್ಲಿಯಲ್ಲಿರುವ ಅಂಡಮಾನ್ & ನಿಕೋಬಾರ್ ದ್ವೀಪಗಳು ಗಟ್ಟಿಯಾದ ಜ್ವಾಲಾಮುಖಿ ನಿರ್ಮಿತ ಶಿಲೆಗಳಿಂದ ಕೂಡಿದೆ.
• ಭಾರತದ ಅತ್ಯಂತ ದಕ್ಷಿಣ ತುದಿ ನಿಕೋಬಾರ್ ದ್ವೀಪದಲ್ಲಿರುವ ಇಂದಿರಾ ಪಾಯಿಂಟ್.
•ಅಂಡಮಾನ್ & ಲಿಟಲ್ ಅಂಡಮಾನ್ ಡಂಕನ್ ಪ್ಯಾಸೇಜ್ (Duncan Passage)ಬೇರ್ಪಡಿಸುವುದು.
————————————
2. ಭಾರತದ ಅತ್ಯಂತ ದಕ್ಷಿಣದ ತುದಿ ಯಾವುದು?
1) ಕೇಪ್ ಕೊಮೊರಿನ್ (ಕನ್ಯಾಕುಮಾರಿ)
2) ಪಾಯಿಂಟ್ ಕ್ಯಾಲಿಮೆರೆ
3) ನಿಕೋಬಾರ್‌ನ ಇಂದಿರಾ ಪಾಯಿಂಟ್
4) ತಿರುವನಂತಪುರಂನ ಕೋವಲಂ
ಉತ್ತರ: (3)
=>(3) ಭಾರತದ ದಕ್ಷಿಣದ ತುದಿ:
• ನಿಕೋಬಾರ್ ದ್ವೀಪದ 6° 45′ ಉತ್ತರ ಅಕ್ಷಾಂಶದಲ್ಲಿರುವ “ಇಂದಿರಾ ಪಾಯಿಂಟ್” (ಪಿಗ್ಗೇಲಿಯನ್ ಪಾಯಿಂಟ್) ಭಾರತದ ಅತ್ಯಂತ ದಕ್ಷಿಣ ತುದಿಯಾಗಿದೆ. ಈ ಬಿಂದುವನ್ನು ಈ ಹಿಂದೆ ‘ಲಾ-ಹಿ-ಚಿಂಗ್’, ಪಿಗ್ದಾಲಿಯನ್ ಪಾಯಿಂಟ್ ಮತ್ತು ಪಾರ್ಸನ್ ಪಾಯಿಂಟ್ ಎಂದು ಕರೆಯಲಾಗುತ್ತಿತ್ತು.
•1980ರ ದಶಕದ ಮಧ್ಯಭಾಗದಲ್ಲಿ ಇಂದಿರಾ ಗಾಂಧಿಯವರ ಗೌರವಾರ್ಥವಾಗಿ ಇದನ್ನು ಮರು ನಾಮಕರಣ ಮಾಡಲಾಯಿತು.
• ಜಮ್ಮು & ಕಾಶ್ಮೀರ ಇಂದಿರಾ ಕೋಲ್ ಭಾರತದ (37°6′ ಉತ್ತರ ಅಕ್ಷಾಂಶ) ಅತ್ಯಂತ ಉತ್ತರ ತುದಿಯಾಗಿದೆ.
• ಪೂರ್ವತುದಿ ಅರುಣಾಚಲ ಪ್ರದೇಶದಲ್ಲಿ ಬರುವ “ಕಿಬಿತು-97°25”
• ಪಶ್ಚಿಮ ತುದಿ – ಗುಜರಾತ್‌ನ ಗುಹಾರ್ ಮುತ್ತು (68°7’E ರೇಖಾಂಶ)
————————————————–
3. ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶವನ್ನು ಏನೆಂದು ಕರೆಯಲಾಗುತ್ತದೆ.
1) ಕೊಂಕಣ
2) ಕೋರಮಂಡಲ್
3) ಪೂರ್ವ ಕರಾವಳಿ
4) ಮಲಬಾರ್ ಕರಾವಳಿ
ಉತ್ತರ: (2)
=> ಕೋರಮಂಡಲ್
• ಗುಜರಾತ್ – ಗುಜರಾತ್ ತೀರ
• ಗೋವಾ & ಮಹಾರಾಷ್ಟ್ರ – ಕೊಂಕಣತೀರ
• ಕರ್ನಾಟಕ – ಕರ್ನಾಟಕ ಅಥವಾ ಕೆನಡಾ
• ಕೇರಳ – ಮಲಬಾರ್ ತೀರ
• ತಮಿಳುನಾಡು & ಆಂಧ್ರಪ್ರದೇಶ -ಕೋರಮಂಡಲ ತೀರ
• ಒಡಿಶಾ & ಪಶ್ಚಿಮ ಬಂಗಾಳ – ಉತ್ಕಲ ತೀರ
————————————
4. ಭಾರತದ ಅತಿ ಎತ್ತರ ಪ್ರಸ್ಥಭೂಮಿ ಯಾವುದು?
1) ಮಾಳ್ವ
2) ಛೋಟಾ ನಾಗ್ಪುರ
3) ಲಡಾಖ್
4) ದಖ್ಖನ್
ಉತ್ತರ: (3)
=>(3) ” ಲಡಾಖ್ “ ಭಾರತದಲ್ಲಿ ಅತಿ ಎತ್ತರದ ಪ್ರಸ್ಥಭೂಮಿ
• ಉತ್ತರದ ಪರ್ವತಗಳು ಪ್ರಾಕೃತಿಕ ವಿಭಾಗದಲ್ಲಿ ಕಂಡುಬರುವ ಮಹಾಹಿಮಾಲಯ (ಹಿಮಾದ್ರಿ) ದಲ್ಲಿರುವ ‘ಲಡಾಖ್’ ಪ್ರಸ್ಥಭೂಮಿಯು ಭಾರತದ ಅತಿ ಎತ್ತರದ ಪ್ರಸ್ಥಭೂಮಿಯಾಗಿದೆ.
• ಪರ್ಯಾಯ ಪ್ರಸ್ಥಭೂಮಿಯು ಭಾರತದ ಭೂಸ್ವರೂಪ ವಿಭಾಗಗಳಲ್ಲಿ ಅತಿ ದೊಡ್ಡದು.
—————————————————-
5. ಸಿಯಾಚಿನ್ ಹಿಮನದಿ ಈ ಕೆಳಗಿನ ಯಾವ ಕಣಿವೆಯ ಸಮೀಪದಲ್ಲಿದೆ?
1) ನುಬ್ರಾ ವ್ಯಾಲಿ
2) ಡೂನ್ ವ್ಯಾಲಿ
3) ಸೈಲೆಂಟ್ ವ್ಯಾಲಿ
4) ನೀಲಂ ವ್ಯಾಲಿ
ಉತ್ತರ:(1)
=> ನುಬ್ರಾ ವ್ಯಾಲಿ
• ಸಿಯಾಚಿನ್ ಹಿಮನದಿ ಹಿಮಾಲಯದ ಪೂರ್ವ ಕಾರಕೊರಂ ಶ್ರೇಣಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ನಿಯಂತ್ರಣ ರೇಖೆಯು ಕೊನೆಗೊಳ್ಳುವ ಬಿಂದುವಿನ ಈಶಾನ್ಯದಲ್ಲಿದೆ. ಪ್ರಸ್ತುತ ಇದು ಲಡಾಖ್ ಕೇಂದ್ರಾಡಳಿತ ಪ್ರದೇಶದ ಭಾಗವಾಗಿದೆ.
• ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿದ್ದು, 31ನೇ ಅಕ್ಟೋಬರ್, 2019ರಂದು.
____________________________
6. ‘ಲೋಕ್ಟಕ್’ ಒಂದು :
1) ಕಣಿವೆ
2) ಸರೋವರ
3) ನದಿ
4) ಪರ್ವತ ಶ್ರೇಣಿ
ಉತ್ತರ: (2)
=> ಲೋಕ್ಟಕ್ ಸರೋವರ
• ತೇಲುವ ಸರೋವರವಾಗಿದ್ದು, ಮಣಿಪುರದಲ್ಲಿದೆ. ಇದು ಈಶಾನ್ಯ ಭಾರತದ ಅತಿ ದೊಡ್ಡ ಸಿಹಿನೀರಿನ ಸರೋವರವಾಗಿದೆ.
• ಕೈಬುಲ್ ಲಾಮಾವೊ ರಾಷ್ಟ್ರೀಯ ಉದ್ಯಾನವನವು (Keibul Lamjan National Park) ಲೋಕ್ಟಕ್ ಸರೋವರದ ಆಗ್ನೆಯ ತೀರದಲ್ಲಿದೆ.
• ಇದು ವಿಶ್ವದ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವನವಾಗಿದೆ.
• ಅಳಿವಿನಂಚಿನಲ್ಲಿರುವ ಸಂಖ್ಯೆ ಜಿಂಕೆಗಳ (Sangaideer) ಕೊನೆಯ ನೈಸರ್ಗಿಕ ಆಶ್ರಯವಾಗಿದೆ.
————————————————-
7. ಈ ಕೆಳಗಿನ ಯಾವ ರಾಜ್ಯವು ಅತಿ ಉದ್ದದ ಕರಾವಳಿಯನ್ನು ಹೊಂದಿದೆ?
1) ಮಹಾರಾಷ್ಟ್ರ
2) ತಮಿಳುನಾಡು
3) ಗುಜರಾತ್
4) ಆಂಧ್ರಪ್ರದೇಶ
ಉತ್ತರ: (3)
=> ಗುಜರಾತ್
• ಗುಜರಾತ್ -1214.7 ಕಿ.ಮೀ
• ಆಂಧ್ರಪ್ರದೇಶ – 973.7 ಕಿ.ಮೀ
• ತಮಿಳುನಾಡು – 906.9 ಕಿ.ಮೀ.
• ಮಹಾರಾಷ್ಟ್ರ – 652.6 ಕಿ.ಮೀ
• ಕೇರಳ -569.7 ಕಿ.ಮೀ
• ಓಡಿಶಾ – 476.4 ಕಿ. ಮೀ
• ಕರ್ನಾಟಕ -280 ಕಿ.ಮೀ
• ಪಶ್ಚಮ ಬಂಗಾಳ -157.5 ಕಿ.ಮೀ
• ಗೋವಾ -101 ಕಿ.ಮೀ
• ಪುದುಚರಿ – 47.6 ಕಿ.ಮೀ
• ಲಕ್ಷದ್ವೀಪ -132 ಕಿ.ಮೀ
• ಅಂಡಮಾನ್& ನಿಕೋಬಾರ್ – 1962 ಕಿ.ಮೀ
• ದಾದ್ರಾ ನಗರ ಹವೇಲಿ ಮತ್ತು ದಿಯು ಮತ್ತು ದಾಮನ್ -42.50 ಕಿ.ಮೀ.
• ಕರ್ನಾಟಕದ ಕರಾವಳಿ ತೀರ- ದಕ್ಷಿಣದಲ್ಲಿ ಮಂಗಳೂರಿನಿಂದ . ಉತ್ತರದಲ್ಲಿ ಕಾರವಾರದವರೆಗೆ 320 ಕಿ.ಮೀ. ಉದ್ದ, 12-64 ಕಿ.ಮೀ ಅಗಲವಾಗಿದೆ.
—————————————————
8. ಹಿಮಾಚಲ ಪ್ರದೇಶದಲ್ಲಿ ಇರುವ ಪಾಸ್ ಯಾವುದು?
1) ಶಿಷ್ಕಲಾ
2) ಜೋಜಿಲಾ
3) ನಾಥುಲಾ
4) ಜೆಲೆಪ್ಲಾ
ಉತ್ತರ: (1)
=> ಶಿಷ್ಕಲಾ
• (1) ಹಿಮಾಚಲ ಪ್ರದೇಶದಲ್ಲಿರುವ ಕಣಿವೆಮಾರ್ಗ – ಶಿಷ್ಕಲಾ ಪಾಸ್
ಹಿಮಾಚಲ ಪ್ರದೇಶದಲ್ಲಿ ಬರುವ ಪ್ರಮುಖ ಪಾಸ್ಗಳು
•ಶಿಷ್ಕಲಾ ಪಾಸ್: ಇದು ಹಿಮಾಚಲ ಪ್ರದೇಶ ಮತ್ತು ಟಿಬೆಟ್ (ಚೀನಾ) ವನ್ನು ಸಂಪರ್ಕಿಸುತ್ತದೆ. ಸಟ್ಲಜ್ ನದಿಯು ಟಿಬೇಟ್‌ನಿಂದ ಭಾರತಕ್ಕೆ ಈ ಪಾಸ್ ಮಾರ್ಗವಾಗಿ ಹರಿಯುತ್ತದೆ.
• ಬಾರಾಲಚಲಾ ಪಾಸ್ (Bara Lacha La Pass): ಇದು ಲೇಪ್‌ನಿಂದ ಮನಾಲಿ ಮಾರ್ಗವಾಗಿ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡುಬರುತ್ತದೆ.
• ರೊಹ್ವಾಂಗ್ ಪಾಸ್ (Rohtang Pass) : ಇದು ಹಿಮಾಲಯದ ಪೀರ್ ಪಂಜಾಲ್ ಶ್ರೇಣಿಯ ಪೂರ್ವ ತುದಿಯಲ್ಲಿರುವ ಎತ್ತರದ ಪರ್ವತ ಮಾರ್ಗವಾಗಿದೆ. ಇದು ಕುಲುಕಣಿವೆಯನ್ನು ಲಾಹೌಲ ಮತ್ತು ಸ್ಥಿತಿ ಕಣಿವೆಗಳೊಂದಿಗೆ ಸಂಪರ್ಕಿಸುತ್ತದೆ.
ವಿಶೇಷತೆ : ಅಟಲ್ ಸುರಂಗವನ್ನು (ರೊಹ್ವಾಂಗ್ ಟನಲ್) ರೊಹ್ವಾಂಗ್ ಪಾಸ್‌ನಲ್ಲಿ ನಿರ್ಮಿಸಲಾಗಿದೆ.
______________________________
9. ವಿಶ್ವದ ಅತಿದೊಡ್ಡ ನದಿ ದ್ವೀಪವಾದ ಮಜೂಲಿ ಯಾವ ರಾಜ್ಯದಲ್ಲಿದೆ?
1) ಅರುಣಾಚಲ ಪ್ರದೇಶ
2) ಅಸ್ಸಾಂ
3) ತ್ರಿಪುರ
4) ಮಿಜೋರಾಂ
ಉತ್ತರ: (2)
=> ಅಸ್ಸಾಂ
• ಅಸ್ಸಾಂ :ಮಜೂಲಿದ್ವೀಪ : ಇದು ಅಸ್ಸಾಂನಲ್ಲಿ ಹರಿಯುವ ಬ್ರಹ್ಮಪುತ್ರ ನದಿಗೆ ಸೃಷ್ಟಿಯಾಗಿದೆ. ಇದು 2016ರಲ್ಲಿ ಭಾರತದಲ್ಲಿ ಜಿಲ್ಲೆಯಾಗಿ ಮಾಡಿದ ಮೊದಲ ದ್ವೀಪವಾಗಿದೆ. (8 ಸಪ್ಟೆಂಬರ್ 2016ರಂದು ಔಪಚಾರಿಕವಾಗಿ ಜಿಲ್ಲೆಯೆಂದು ಘೋಷಣೆ) ಇಲ್ಲಿ ಕಂಡುಬರುವ ಜನಾಂಗೀಯ
•ಗುಂಪು : ಮಿಶಿಂಗ್, ದಿಯೋರಿ, ಸೋನೋವಾಲ್ ಕಚಾರಿಸ್, ಚುಟಿಯಾ.
_______________________________
10. ಥಾರ್ ಎಕ್ಸ್‌ಪ್ರೆಸ್ ಹಾದು ಹೋಗುವುದು ______
1) ಅಫ್ಘಾನಿಸ್ತಾನ
2) ಬಾಂಗ್ಲಾದೇಶ
3) ಪಾಕಿಸ್ತಾನ
4) ಮಯನ್ಮಾರ್
ಉತ್ತರ: (3)
• ಥಾರ್ ಎಕ್ಸ್‌ಪ್ರೆಸ್ : ಅಂತರಾಷ್ಟ್ರೀಯ ಪ್ರಯಾಣಿಕ ರೈಲು. ಭಾರತದ ರಾಜಸ್ಥಾನದ ಜೋಧಪುರದ ಭಗತ್ ಕಿ ಕೋಠಿಯಿಂದ ಪಾಕಿಸ್ತಾನ ಪ್ರಾಂತ್ಯದ ಸಿಂದ್ ನಲ್ಲಿರುವ ಕರಾಚಿಯ ಕರಾಚಿ ಕಂಟೋನ್ಸೆಂಟ್ ನಡುವೆ ಚಾಲ್ತಿಯಲ್ಲಿತ್ತು.
• ಸಂಜೋತಾ ಎಕ್ಸ್‌ಪ್ರೆಸ್: ಭಾರತ ಮತ್ತು ಪಾಕಿಸ್ತಾನ
• ಮೈತ್ರಿ ಎಕ್ಸ್‌ಪ್ರೆಸ್: ಭಾರತದ ಕೋಲ್ಕತ್ತಾದಿಂದ ಬಾಂಗ್ಲಾದೇಶದ ಢಾಕಾ ಮಧ್ಯೆ.
• ಬಂಧನ್ ಎಕ್ಸ್‌ಪ್ರೆಸ್ : ಕೊಲ್ಕತ್ತಾದಿಂದ ಬಾಂಗ್ಲಾದೇಶದ ಖುಲ್ನಾವರೆಗೆ.
_______________________________
11. ಕಾಂಚನಜುಂಗಾ ಎಲ್ಲಿ ಕಂಡುಬರುತ್ತದೆ ?
1) ನೇಪಾಳ
2) ಸಿಕ್ಕಿಂ
3) ಪಶ್ಚಿಮ ಬಂಗಾಳ
4) ಹಿಮಾಚಲ ಪ್ರದೇಶ
ಉತ್ತರ: (2)
=> ಸಿಕ್ಕಿಂ
• ಭಾರತದ ಸಿಕ್ಕಿಂ ರಾಜ್ಯದಲ್ಲಿ ಕಂಡುಬರುವ ಕಾಂಚನ ಜುಂಗಾ ವಿಶ್ವದ 3ನೇ ಅತಿ ಎತ್ತರದ ಪರ್ವತವಾಗಿದೆ. ಇದು 8598 ಮೀಟರ್ ಎತ್ತರವಾಗಿದೆ.
• ಇದು, ಮಹಾಹಿಮಾಲಯ (ಹಿಮಾದ್ರಿ) ಸರಣಿಗಳಲ್ಲಿ ಕಂಡುಬರುತ್ತದೆ.
• ಮೌಂಟ್ ಎವರೆಸ್ಟ್ ಶಿಖರ-8848 ಮೀ (ನಿಖರವಾಗಿ 8848.86 ಮೀ)
• ಗಾಡ್ರಿನ್ ಆಸ್ಟಿನ್ ಅಥವಾ K-8611 ಮೀಟರ್ (ಭಾರತದಲ್ಲಿ ಅತಿ ಎತ್ತರವಾದ ಶಿಖರವಾಗಿದೆ. POK).
______________________________
12. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಅತಿ ಎತ್ತರದ ಶಿಖರ ಯಾವುದು?
1) ಮೌಂಟ್ ಕೋಯಾ
2) ಮೌಂಟ್ ಡಿಯಾವೊಲೊ
3) ಸ್ಯಾಡಲ್ ಶಿಖರ
4) ಮೌಂಟ್ ಥುಯಿಲ್ಲರ್
ಉತ್ತರ: (3)
=> ಸ್ಯಾಡಲ್ ಶಿಖರ
• ಅತಿ ಎತ್ತರದ ಶಿಖರ ಸ್ಯಾಡಲ್ ಶಿಖರ – 738 ಮೀ ಇದರ ಎತ್ತರ (NCERT)
• ಮೌಂಟ್ ದಿಯಾವೋಲೋ – ಮಧ್ಯ ಅಂಡಮಾನ್ – 515 ಮೀಟರ್
• ಮೌಂಟ್ ಕೊಯೋಬೋ (Koyobo) – ದಕ್ಷಿಣ ಅಂಡಮಾನ್ – 460 ಮೀಟರ್
•ಮೌಂಟ್ ಹ್ಯಾರಿಯಟ್ (Harriet) ದಕ್ಷಿಣ ಅಂಡಮಾನ್ -450 ಮೀಟರ್
• ಮೌಂಟ್ ಥುಯಿಲ್ಲರ್ (Mt. Thullier) – ಗ್ರೇಟ್ ನಿಕೋಬಾರ್ 642 ಮೀಟರ್